2025 ದ್ವಿತೀಯ ಪಿಯುಸಿ ಫಲಿತಾಂಶ 100% ಹಾಗೂ 7 ರ‍್ಯಾಂಕ್
- Vidyodaya P U College
- Apr 8
- 1 min read

ಉಡುಪಿಯ ವಿದ್ಯೋದಯ ಟ್ರಸ್ಟ್ (ರಿ.) ನ ಅಂಗಸಂಸ್ಥೆಯಾದ ವಿದ್ಯೋದಯ ಪದವಿಪೂರ್ವ ಕಾಲೇಜು 2024-25ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ 100 ಫಲಿತಾಂಶ ದಾಖಲಿಸಿದೆ.
ಈ ಬಾರಿ ವಿಜ್ಞಾನ ವಿಭಾಗದಲ್ಲಿ 100% ಫಲಿತಾಂಶ ದಾಖಲಾಗಿದ್ದು, ಈ ವರುಷ 234 ವಿದ್ಯಾರ್ಥಿಗಳು ಪರೀಕ್ಷೆಯನ್ನು ತೆಗೆದುಕೊಂಡಿದ್ದು; 129 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಮತ್ತು 100 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಮತ್ತು 5 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ 100% ಫಲಿತಾಂಶ ದಾಖಲಾಗಿದ್ದು, ಈ ವರುಷ 91 ವಿದ್ಯಾರ್ಥಿಗಳು ಪರೀಕ್ಷೆಯನ್ನು ತೆಗೆದುಕೊಂಡಿದ್ದು; 45 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಮತ್ತು 46 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ವಿಜ್ಞಾನ ವಿಭಾಗದಲ್ಲಿ 4 ರಾಜ್ಯ ಮಟ್ಟದ ರ‍್ಯಾಂಕಗಳು:
ಶಾಂತಾ, ಈಶಾ, ಅನನ್ಯಾ ಸದಾಶಿವ ಶೆಟ್ಟಿಗಾರ್ 591 ಅಂಕಗಳೊಂದಿಗೆ 9ನೇ ರ‍್ಯಾಂಕ್ ಮತ್ತು ಗೌರಿ ಎಸ್. 590 ಅಂಕಗಳೊಂದಿಗೆ 10ನೇ ರ‍್ಯಾಂಕ್‌ನ್ನು ಗಳಿಸಿರುತ್ತಾರೆ.
ವಾಣಿಜ್ಯ ವಿಭಾಗದಲ್ಲಿ 3 ರಾಜ್ಯ ಮಟ್ಟದ ರ‍್ಯಾಂಕಗಳು:
ಪ್ರಣವಿ ಎಚ್. ಸುವರ್ಣ 595 ಅಂಕಗಳೊಂದಿಗೆ 5ನೇ ರ‍್ಯಾಂಕ್ ಮತ್ತು ಉಡುಪಿ ಜಿಲ್ಲೆಗೆ ಪ್ರಥಮ ರ‍್ಯಾಂಕ್, ಮೊಹಮ್ಮದ್ ರಿಜಾನ್ 593 ಅಂಕಗಳೊಂದಿಗೆ 7ನೇ ರ‍್ಯಾಂಕ್ ಮತ್ತು ಆರುಷಿ ದಿನಕರ ಮುಲ್ಕಿ ಸುವರ್ಣ 590 ಅಂಕಗಳೊಂದಿಗೆ 10ನೇ ರ‍್ಯಾಂಕ್ ಗಳಿಸಿರುತ್ತಾರೆ.